The Commission publishes this paper without an answer key, so no answers are shown.
1. ಈ ಗದ್ಯಭಾಗವನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
ಹರಿಪುರಿ ಎಂಬ ಪೊಳಲೊಳ್ ಗಂಭೀರೆ ಎಂಬ ಬಿರ್ದ್ದಿಯಾಕೆಯ ಮಗಳ್ ಹರಿಣಿಯೆಂಬೊಳ್ ಆಕೆಯಂ ಜಯಂತಮೆಂಬ ಪೊಳಲೊಳ್ ವಸುದತ್ತನೆಂಬ ಪರದಂಗೆ ಕೊಟ್ಟೊಡೆ ಆಕೆಗೆ ಗರ್ಭಮಾಗಿ ಮೋದಗೆಯ ಮೇಗೆ ಬಯಕೆಯಾದೊಡೆ ತಾಯ್ ಪಲವು ತೆರದ ಲಡ್ಡುಗೆಗಳಂ ಮಂಡಗೆಗಳಂ ಮೊದಲಾಗೊಡೆಯ ಪಲವು ಭಕ್ಷ್ಯ ರೂಪಂಗಳಂ ಕೊಂಡು ಗಂಭೀರೆಯೆಂಬ ಬಿರ್ದ್ದಿ ಹರಿಪುರದಿಂ ಪೊರಮಟ್ಟು ಮಗಳಿದ್ದೂರ್ಗೆ ಪೋಪನ್ನೆಗಮ್ ಆಯೆಡೆಯೊಳ್ ಬರ್ಪ ಕಳ್ಳರಂ ಕಂಡು ಅವರೊಳಗೆ ಒರ್ವನಂ ಪಿಡಿದು ಎನ್ನ ಮಗನ್ ನಿನ್ನನ್ನನೇ ಪನ್ನೆರಡು ಬರಿಸಂ ಪೋದನ್ ಎತ್ತ ಪೋದನೆಂದರಿಯೆಮ್ ಆತನಂ ಕಾಣದಿರುಳಂ ಪಗಲುಂ ನೆನೆನೆನೆದು ಅತ್ತು ಕಣ್ಗಳ್ ಬಾತಿರ್ಪದು ಇಂದೆನಗಾತನಂ ಬಂದಂತಿರೆ ನಿನ್ನಂ ಕಂಡು ಸಂತಸಮಾಯ್ತು ಮಗನೆ ನೀಮೆಲ್ಲಂ ಬನ್ನಿಂ ಪೋಪಂ ಸಾರೆಯೂರು ಮಿಂದುಂಡುಟ್ಟು ವಿಶ್ರಮಿಸಿ ನಾಳೆ ಪೋಪಿರೆಂದು ಒಗಡೊಂಡು ಪೋಗಿ ಮಗಳ ಮನೆಯನೆಯ್ದಿ ಅವರ್ಗ್ಗೆಲ್ಲಂ ನೀರನಿಡಿಸಿ ತಲೆಯಂ ಪೂಸಿಸಿಯೊಲ್ಲಣಿಗೆಯನುಡಿಸಿ ತಲೆಯೊಳ್ ತಳಿಯಂ ಮೊಯ್ದಾಗಳ್ ಬಿರ್ದ್ದಿ ಮನೆಯ ಮೇಗೇರಿ ಕಳ್ಳರೆಂದು ಪುಯ್ಯಲಿಟ್ಟಾಗಳ್ ಅನಿಬರುಂ ತ್ರಸ್ಥಾಭಿಭೂತರಾಗಿ ಪಟ್ಟನೆ ಪರಿಯೆಯೊಡಿ ಕೆಟ್ಟೊಳ್ಳಿತ್ತೆಮ್ಮಂ ಛಿದ್ರಿಸಿದಳೆಂದು ಪಗೆ ಸಾರಿರ್ದರ್. ಇತ್ತ ಬಿರ್ದ್ದಿಯುಂ ನೆಟ್ಟನೆ ಒಂದಿರುಳ್ ಕಳ್ಳರ್ ಬರ್ಪರೆಂದರಿದು ಕೂರಿತಪ್ಪ ಬಾಳಂ ಪಿಡಿದಿರ್ದ್ದಳ್ ಅನ್ನೆಗಮ್ ಇರುಳ್ ಕಳ್ಳರ್ ಬಂದಾಕೆಯ ಲುಂದಿದ ಮನೆಯೊಳ್ ಕನ್ನಮಿಕ್ಕಿದೊಡೆ. ಕನ್ನದ ಬಾಗಿಲೊಳ್ ಬಾಳನಡ್ಡಮಿಟ್ಟು ಪಿಡಿದಿರ್ದ್ದು. ಪುಗುವ ಕಳ್ಳನ ಮೂಗರಿದೊಡೆ ಅವಂ ಪೊರಮಟ್ಟು ಎನಗೆ ಪಗಲ್ ಪಾಂಗಿಲ್ಲ ನೀಂ ಪುಗೆಂದು ಪೆರನೊರ್ವನಂ ಪುಗಿಸಿದೊಡೆ ಆತನ ಮೂಗುವಂ ಕೊರೆದೊಡೆ ಆತನುಂ ಪೆರನೊರ್ವನಂ ಪುಗಿಸಿಯಂತೆ ಅನಿಬರುಂ ಸೂಳ್ ಸೂಳೊಳೆ ಪೊಕ್ಕು ಅನಿಬರ ಮೂಗುಮಂ ಕೊರೆದಿಕ್ಕಿದೊಡೆ ಅನಿಬರುಂ ಮೂಗರಿಯೆಪಟ್ಟು ಪೊರಮಟ್ಟು ಪೋಗಿ ಓರ್ವ ಇಂದ್ರಜಾಲಿಗನ ಮನೆಯೊಳ್ ಕನ್ನಮಿಕ್ಕಿದರ್.
ಗಂಭೀರೆಯು ಮಗಳಿದ್ದೂರಿಗೆ ಹೋಗುತ್ತಿರುವುದರಲ್ಲಿನ ಸಾಂಪ್ರದಾಯಿಕ ವೈಶಿಷ್ಟ್ಯಗಳನ್ನು ಪರಿಚಯಿಸಿ. (2)
2. ದಾರಿಯಲ್ಲಿ ಕಳ್ಳರು ಎದುರಾದಾಗ ಗಂಭೀರೆಯ ಸಮಯಪ್ರಜ್ಞೆ ಹೇಗೆ ಕೆಲಸ ಮಾಡಿದೆ? (2)
3. ಕಳ್ಳರನ್ನು ತನ್ನೊಡನೆ ಕರೆದುಕೊಂಡು ಹೋದ ಗಂಭೀರೆಯು ಉಪಚರಿಸಿದ್ದು ಹೇಗೆ? (2)
4. ಮನೆಗೆ ಕನ್ನ ಹಾಕಲು ಬಂದ ಕಳ್ಳರಿಗೆ ಮುದುಕಿ ಕೊಟ್ಟ ಶಿಕ್ಷೆ ಎಂಥದ್ದು? (2)
5. ಮೊದಲು ಮೂಗು ಕತ್ತರಿಸಿಕೊಂಡ ಕಳ್ಳರ ಮನಃಸ್ಥಿತಿ ಮತ್ತು ಸ್ವಭಾವ ಹೇಗೆ ವ್ಯಕ್ತವಾಗಿದೆ? (2)
6. ಪ್ರಸ್ತುತ ಭಾರತದಲ್ಲಿನ ಸಾಮಾಜಿಕ ಬಿಕ್ಕಟ್ಟುಗಳು – ಕುರಿತು ಪ್ರಬಂಧ ಬರೆಯಿರಿ. (100 ಪದಗಳಿಗೆ ಕಡಿಮೆಯಿಲ್ಲದಂತೆ 200 ಪದಗಳಿಗೆ ಮೀರದಂತೆ) (10)
7. ಈ ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು 50 ಪದಗಳಿಗೆ ಮೀರದಂತೆ ಸಂಕ್ಷೇಪಿಸಿ, ಸೂಕ್ತ ಶೀರ್ಷಿಕೆ ಕೊಡಿ.
ಒಂದು ಕಾಡು. ಆ ಕಾಡಿನಲ್ಲಿ ಒಂದು ಸಿಂಹ, ಒಂದು ತೋಳ, ಒಂದು ನರಿ ವಾಸಿಸುತ್ತಿದ್ದವು. ಈ ಮೂರೂ ಪ್ರಾಣಿಗಳು ಒಳ್ಳೆಯ ಸ್ನೇಹಿತರು. ಈ ಮೂರೂ ಪ್ರಾಣಿಗಳು ಸೇರಿ ಒಂದು ದಿನ ಭರ್ಜರಿ ಬೇಟೆ ಆಡಿದವು. ಹಾಗೆ ಬೇಟೆ ಆಡಿದ ವಿವಿಧ ಜಾತಿಯ ಪ್ರಾಣಿಗಳನ್ನೆಲ್ಲಾ ಒಂದು ಕಡೆ ಗುಡ್ಡದಂತೆ ರಾಶಿ ಹಾಕಿದವು. ಬೆಟ್ಟದಂತೆ ಬಿದ್ದಿದ್ದ ರಾಶಿಯನ್ನು ನೋಡಿ ಆಸೆಯಿಂದ ಸಿಂಹವು ತೋಳಕ್ಕೆ ಹೇಳಿತು. ‘ತೋಳಣ್ಣ, ಈ ಪ್ರಾಣಿಗಳನ್ನೆಲ್ಲಾ ಸಮವಾಗಿ ಮೂರು ಪಾಲು ಹಾಕು’ ಎಂದಿತು. ಆಗ ತೋಳವು ಮೂವರಿಗೂ ಸಮಪಾಲು ಮಾಡಿ ‘ಸರಿತಾನೇ?’ ಎಂದು ಸಿಂಹದ ಕಡೆ ನೋಡಿತು. ಆ ರಾಶಿಗಳ ಕಡೆ ಸಿಂಹ ನೋಡಿ ಏನನ್ನೂ ಮಾತಾಡಲಿಲ್ಲ. ಒಮ್ಮೆಲೆ ತೋಳದ ಕುತ್ತಿಗೆಯನ್ನು ಕಚ್ಚಿಹಿಡಿದು ರಕ್ತವನ್ನು ಹೀರಿ ಸಾಯಿಸಿತು.
ಸಿಂಹ ತೋಳವನ್ನು ಸಾಯಿಸಿದ್ದನ್ನು ಗಮನಿಸಿದ ನರಿ ತುಟಿಪಿಟಕ್ ಅನ್ನಲಿಲ್ಲ. ನರಿಯ ಕಡೆ ಸಿಂಹ ನೋಡಿತು. ನರಿ ಕಣ್ ಕಣ್ ಬಿಡುತ್ತ ಕುಳಿತಿತ್ತು. ಸಿಂಹ ನರಿಗೆ ಹೇಳಿತು. ‘ಓಯ್ ನರಿ, ಇವೆಲ್ಲವನ್ನೂ ನಮ್ಮಿಬ್ಬರಿಗೆ ಸರಿಸಮಾನವಾಗಿ ಪಾಲುಮಾಡು’ ಎಂದಿತು. ನರಿ ಎಲ್ಲಾ ಪ್ರಾಣಿಗಳನ್ನು ಒಂದೇ ಕಡೆ ರಾಶಿ ಹಾಕಿತು. ಒಂದೇ ಒಂದು ಮೊಲದ ಮರಿಯನ್ನು ತೆಗೆದು ಇನ್ನೊಂದು ರಾಶಿಯಂತೆ ಇಟ್ಟಿತು. ನಂತರ ‘ಸಿಂಹರಾಜ, ಸಮವಾಗಿ ಎರಡು ರಾಶಿ ಮಾಡಿರುವೆನು. ಈ ರಾಶಿಗಳಲ್ಲಿ ಎಲ್ಲಾ ಪ್ರಾಣಿಗಳ ರಾಶಿಯನ್ನು ನೀನು ತೆಗೆದುಕೊ. ನನಗೆ ಈ ಮೊಲದ ಮರಿ ಸಾಕು’ ಎಂದಿತು. ‘ನರಿಯಣ್ಣ, ಪಾಲನ್ನು ಸರಿಸಮಾನವಾಗಿ ಮಾಡಿರುವೆಯಲ್ಲ. ಶಭಾಷ್, ನಿನ್ನ ಬುದ್ಧಿಶಕ್ತಿಗೆ ಮೆಚ್ಚಿದೆ. ಹೀಗೆ ಮಾಡಬೇಕೂಂತ ನಿನಗೆ ಹೇಳಿಕೊಟ್ಟವರಾರು?’ ಎಂದು ಕೇಳಿತು. ‘ಈ ಮೊದಲು ಸತ್ತ ತೋಳ ಸ್ವಾಮಿ’ ಎಂದಿತು ನರಿ. ‘ಏನೂಂತ?’ ವ್ಯಕ್ತಿಯನ್ನು ನೋಡಿ ನಡೆದುಕೊ. ನೋಡಿ ನಡೆದುಕೊಂಡರೆ ಕೇಡಿಲ್ಲ ಅಂತ ಎಂದಿತು. (10)
8. ಈ ಕೆಳಗೆ ಕೊಟ್ಟಿರುವ ಕನ್ನಡ ಗದ್ಯಭಾಗವನ್ನು ಇಂದ್ಲೀಷ್‌ಗೆ ಭಾಷಾಂತರ ಮಾಡಿ. ನ್ಯಾಯದ ವಿಚಾರ ಮಾತಾಡುವಾಗ "ನ್ಯಾಯ ಎಲ್ಲರಿಗೂ ಒಂದೇ ಎಂದೇನೋ ಹೇಳುತ್ತೇವೆ. ಆದರೆ ಎಷ್ಟೋ ಸಲ ನ್ಯಾಯ ಅಧಿಕಾರಸ್ಥ ಮತ್ತು ಬಲಾಢ್ಯರ ಕಡೆಗೆ ಜೋತು ಬೀಳುತ್ತದೆ. ಅಂಥ ಸಂದರ್ಭದಲ್ಲಿ ಅನೇಕ ಅಶಕ್ತರಿಗೆ, ದೀನ ದುರ್ಬಲರಿಗೆ ಅನ್ಯಾಯ ಆಗುತ್ತದೆ. ಇಂಥ ಅನ್ಯಾಯವನ್ನು ಅವರು ಬಾಯಿ ಬಿಟ್ಟು ಹೇಳುವುದಕ್ಕೂ ಸಾಧ್ಯವಾಗದಂಥ ಸಂಕಟಕ್ಕೆ ಸಿಕ್ಕಿ ಬೀಳುತ್ತಾರೆ. ಮತ್ತೆ ಕೆಲವರು ಆ ಬಲಾಢ್ಯರ ವಿರುದ್ಧ ತಿರುಗಿ ಬಿದ್ದರೆ ತಮಗೆಲ್ಲಿ ಅಪಾಯ ಆಗುತ್ತದೋ ಎಂದು ತಿಳಿದು ಅನ್ಯಾಯವನ್ನು ಒಪ್ಪಿಕೊಂಡು ಅದಕ್ಕೆ ತಲೆಬಾಗಿ ತಣ್ಣಗಿದ್ದು ಬಿಡುತ್ತಾರೆ. ಹೀಗೆ ನಡೆದುಕೊಂಡರೆ ಅದರಿಂದಾಗುವ ಕೇಡಿನಿಂದ ಪಾರಾಗಬಹುದು. ಇಲ್ಲದಿದ್ದರೆ ಸಂಕಟಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ ಎಂಬ ಸಣ್ಣ ತಿಳುವಳಿಕೆ ಅವರದು'.
ಇಂಥ ವ್ಯಕ್ತಿಗಳ ಬದುಕಿನಲ್ಲಿ ಆಲೋಚನೆ ತುಂಬಾ ಮುಖ್ಯವಾಗುತ್ತದೆ. ಯಾವಾಗ, ಏನನ್ನೂ ಮಾತಾಡಬೇಕು? ಎಂತಹ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಅರಿವು ಅವನಲ್ಲಿರಬೇಕಾಗುತ್ತದೆ. ಸಮಯ ಸಂದರ್ಭವನ್ನು ಅರಿತುಕೊಳ್ಳದೆ ಪ್ರತಿಭಟಿಸಿ ಮಾತಾಡಿದರೆ ಅಪಾಯಗಳು ಎದುರಾಗಬಹುದು. ವಿರೋಧಿಸುವ ಮೊದಲು ಒಂದಲ್ಲ ಹತ್ತು ಸಲ ಆಲೋಚಿಸಿ, ನಂತರ ಮಾತಾಡಬೇಕು. ಒಮ್ಮೊಮ್ಮೆ ಮೌನವೂ ಆ ವ್ಯಕ್ತಿಯನ್ನು ಅಪಾಯದಿಂದ ಪಾರುಮಾಡಬಹುದು. ಹಾಗಾಗಿ ಪ್ರತಿ ವ್ಯಕ್ತಿಯ ಎದುರಿನಲ್ಲಿರುವ ಸಮಸ್ಯೆ ಎಷ್ಟೇ ದೊಡ್ಡದಾದರೂ, ಎಷ್ಟೇ ಅನ್ಯಾಯಯುತವಾಗಿದ್ದರೂ, ಅದು ಆ ವ್ಯಕ್ತಿಗೆ ಎಷ್ಟೇ ನೋವನ್ನು ತಂದುಕೊಟ್ಟೆದ್ದರೂ ತಾನು ಯಾರೊಡನೆ ವಾದಕ್ಕೆ ಇಳಿಯುತ್ತಿದ್ದೇನೆ. ಯಾರನ್ನು ಎದುರು ಹಾಕಿಕೊಳ್ಳುತ್ತಿದ್ದೇನೆ ಎಂಬ ಪ್ರಜ್ಞೆ ಮಾತ್ರ ಆತನ ಮನಸ್ಥಿನಲ್ಲಿ ಸದಾ ಜಾಗೃತವಾಗಿರಬೇಕು. ಬಡವನ ಕೋಪ ದವಡೆಗೆ ಮೂಲ ಎಂಬ ಗಾದೆಯಂತೆ ಕೋಪವೂ ಕೆಲವೊಮ್ಮೆ ಅವನ ಬದುಕಿಗೆ ಮುಳುವಾಗಬಹುದು. ಕೋಪ ವಿವೇಕವನ್ನು ಕೊಂದು ಹಾಕುತ್ತದೆ. ಕೋಪದ ಕೈಗೆ ಮನಸ್ಸು ಕೊಡಬಾರದು. ಎಂಥ ದುಃಖ ಮತ್ತು ಸಂಕಷ್ಟದಲ್ಲೂ ತಾಳ್ಮೆ ಅಥವಾ ಸಹನೆ ತೀರ ಅಗತ್ಯವಾಗಿ ಬೇಕಾಗುತ್ತದೆ. ಈ ಸಹನೆಯೇ ಮನುಷ್ಯನನ್ನು ಅನೇಕ ಅವಘಡಗಳಿಂದ ಪಾರುಮಾಡಬಲ್ಲ ಏಕೈಕ ಮಂತ್ರ. ಹೀಗಾಗಿ ಪ್ರತಿ ವ್ಯಕ್ತಿಯೂ ತನ್ನ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕಿರುವ ಸಂಗತಿಯೆಂದರೆ Soe ಕಾಯುತ್ತದೆ ಕೋಪ ಕೊಲ್ಲುತ್ತದೆ ಎಂಬುದು. (20)
Discussion
Ask a doubt or share a tip.
No comments yet — start the discussion.